Sunday, 30 August 2026
ತಾಜಾ ಸುದ್ದಿ
ಜನನದ ಬಳಿಕ ಮೊದಲ 6 ಗಂಟೆಗಳಲ್ಲಿ ಚಿಕಿತ್ಸೆಗೆ ಒತ್ತು: ಮೆಡಿಕವರ್‌ನಲ್ಲಿ ಥೆರಪ್ಯೂಟಿಕ್ ಹೈಪೋಥರ್ಮಿಯಾ ಕಾರ್ಯಾಗಾರಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ 15×8 ಸೆಂ.ಮೀ. ಅಪೆಂಡಿಕ್ಸ್ ಟ್ಯೂಮರ್‌ ಯಶಸ್ವಿಯಾಗಿ ತೆಗೆದ ಮೆಡಿಕವರ್ ವೈದ್ಯರುವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನದಿಂದ ಜೀವ ಉಳಿಸುವ ಸಂದೇಶ ಸಾರಿದ ಮೆಡಿಕವರ್ ಆಸ್ಪತ್ರೆವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೂತನ ವಾಟರ್ ಬರ್ತಿಂಗ್ ಸೂಟ್‌ಗೆ ಚಾಲನೆ100 ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಮೆಡಿಕವರ್ ಆಸ್ಪತ್ರೆಮೂತ್ರಪಿಂಡದ ಕ್ಯಾನ್ಸರ್‌ಗೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ ಮೆಡಿಕವರ್ ಆಸ್ಪತ್ರೆನವಜಾತ ಶಿಶುಗಳ ಶ್ರವಣ ತಪಾಸಣೆ ಉತ್ತಮ ಭವಿಷ್ಯಕ್ಕೆ ಅಡಿಪಾಯ: ಮೆಡಿಕವರ್ ಆಸ್ಪತ್ರೆ ವೈದ್ಯರುರೈಲು ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಎಸ್‌ಎಂವಿಟಿಯಲ್ಲಿ ಮೆಡಿಕವರ್ ಆಸ್ಪತ್ರೆಯ 24×7 ಉಚಿತ ಆಂಬ್ಯುಲೆನ್ಸ್ ಸೇವೆಜನನದ ಬಳಿಕ ಮೊದಲ 6 ಗಂಟೆಗಳಲ್ಲಿ ಚಿಕಿತ್ಸೆಗೆ ಒತ್ತು: ಮೆಡಿಕವರ್‌ನಲ್ಲಿ ಥೆರಪ್ಯೂಟಿಕ್ ಹೈಪೋಥರ್ಮಿಯಾ ಕಾರ್ಯಾಗಾರಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ 15×8 ಸೆಂ.ಮೀ. ಅಪೆಂಡಿಕ್ಸ್ ಟ್ಯೂಮರ್‌ ಯಶಸ್ವಿಯಾಗಿ ತೆಗೆದ ಮೆಡಿಕವರ್ ವೈದ್ಯರುವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನದಿಂದ ಜೀವ ಉಳಿಸುವ ಸಂದೇಶ ಸಾರಿದ ಮೆಡಿಕವರ್ ಆಸ್ಪತ್ರೆವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೂತನ ವಾಟರ್ ಬರ್ತಿಂಗ್ ಸೂಟ್‌ಗೆ ಚಾಲನೆ100 ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಮೆಡಿಕವರ್ ಆಸ್ಪತ್ರೆಮೂತ್ರಪಿಂಡದ ಕ್ಯಾನ್ಸರ್‌ಗೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ ಮೆಡಿಕವರ್ ಆಸ್ಪತ್ರೆನವಜಾತ ಶಿಶುಗಳ ಶ್ರವಣ ತಪಾಸಣೆ ಉತ್ತಮ ಭವಿಷ್ಯಕ್ಕೆ ಅಡಿಪಾಯ: ಮೆಡಿಕವರ್ ಆಸ್ಪತ್ರೆ ವೈದ್ಯರುರೈಲು ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಎಸ್‌ಎಂವಿಟಿಯಲ್ಲಿ ಮೆಡಿಕವರ್ ಆಸ್ಪತ್ರೆಯ 24×7 ಉಚಿತ ಆಂಬ್ಯುಲೆನ್ಸ್ ಸೇವೆ
ಆರೋಗ್ಯ

ಲ್ಯಾಪರೋಸ್ಕೋಪಿಕ್ ವಿಧಾನದಲ್ಲಿ 15×8 ಸೆಂ.ಮೀ. ಅಪೆಂಡಿಕ್ಸ್ ಟ್ಯೂಮರ್‌ ಯಶಸ್ವಿಯಾಗಿ ತೆಗೆದ ಮೆಡಿಕವರ್ ವೈದ್ಯರು

ಬೆಂಗಳೂರು : ಹೊಟ್ಟೆ ನೋವಿನಿಂದ ಬಳಲುತ್ತಿದ್ದ 50 ವರ್ಷದ ವ್ಯಕ್ತಿಯ ಅಪೆಂಡಿಕ್ಸ್‌ನಲ್ಲಿ ಕಾಣಿಸಿಕೊಂಡಿದ್ದ ದೊಡ್ಡ ಗಾತ್ರದ ಮ್ಯೂಸಿನಸ್ ಟ್ಯೂಮರ್‌ಗೆ ಬೆಂಗಳೂರಿನ ಹೂಡಿಯ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.

ರೋಗಿಗೆ ಸುಮಾರು ಒಂದೂವರೆ ತಿಂಗಳಿನಿಂದ ಹೊಟ್ಟೆಯಾದ್ಯಂತ ನೋವು ಹಾಗೂ ಮಲಬದ್ಧತೆ ಕಾಣಿಸಿಕೊಂಡಿತ್ತು. ಹೆಚ್ಚಿನ ಪರೀಕ್ಷೆಗಳ ಭಾಗವಾಗಿ ನಡೆಸಿದ CECT ಸ್ಕ್ಯಾನ್‌ನಲ್ಲಿ ಹೊಟ್ಟೆಯ ಬಲಭಾಗ ಹಾಗೂ ಬಲ ಇಲಿಯಾಕ್ ಫೋಸಾದಲ್ಲಿ ಅಪೆಂಡಿಕ್ಸ್‌ನಿಂದ ಉಂಟಾಗಿರುವ ಟ್ಯೂಮರ್ ಇರುವ ಸಾಧ್ಯತೆ ಕಂಡುಬಂದಿತ್ತು.

ಶಸ್ತ್ರಚಿಕಿತ್ಸೆಯ ವೇಳೆ ಅಪೆಂಡಿಕ್ಸ್‌ನಿಂದ ಉಂಟಾಗಿದ್ದ 15×8 ಸೆಂ.ಮೀ. ಗಾತ್ರದ ಟ್ಯೂಮರ್ ಪತ್ತೆಯಾಯಿತು. ಪೆರಿಟೋನಿಯಂ ಹಾಗೂ ಇತರ ಹೊಟ್ಟೆಯ ಒಳಭಾಗವು ಸಾಮಾನ್ಯವಾಗಿದ್ದವು. ರೋಗಿಗೆ ಲ್ಯಾಪರೋಸ್ಕೋಪಿಕ್ ರ್ಯಾಡಿಕಲ್ ರೈಟ್ ಹೆಮಿಕೋಲೆಕ್ಟಮಿ ಜೊತೆಗೆ ಎಂಡ್-ಟು-ಸೈಡ್ ಇಲಿಯೋ-ಕೋಲಿಕ್ ಅನಾಸ್ಟಮೋಸಿಸ್ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಈ ಶಸ್ತ್ರಚಿಕಿತ್ಸೆಯನ್ನು ಮೆಡಿಕವರ್ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಜಿಐ ಆಂಕಾಲಜಿಸ್ಟ್ ಡಾ. ಯಾಮಿನಿ ಚಿತ್ರಾ ವಿ. ಅವರ ನೇತೃತ್ವದಲ್ಲಿ ನಡೆಸಲಾಯಿತು. ಶಸ್ತ್ರಚಿಕಿತ್ಸೆಯಲ್ಲಿ ಟ್ಯೂಮರ್ ಸೇರಿದಂತೆ ಬಾಧಿತ ಕರುಳಿನ ಭಾಗವನ್ನು ತೆಗೆದುಹಾಕಿ, ನಂತರ ಕರುಳಿನ ಸಂಪರ್ಕವನ್ನು ಪುನರ್‌ನಿರ್ಮಿಸಲಾಯಿತು.

ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹಾಗೂ ಶಸ್ತ್ರಚಿಕಿತ್ಸೆಯ ನಂತರ ಯಾವುದೇ ತೊಂದರೆಗಳು ಉಂಟಾಗಲಿಲ್ಲ. ರೋಗಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದ್ದು, ಸದ್ಯ ರೋಗಿಯು ತುಂಬಾ ಲವಲವಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ.

ಇನ್ನು ಚಿಕಿತ್ಸೆಗೆ ಒಳಗಾದ ವ್ಯಕ್ತಿ ಶ್ರೀನಿವಾಸ್ ಮಾತನಾಡಿ ನಾವು ಈ ಹಿಂದೆ ಹಲವು ಆಸ್ಪತ್ರೆಗೆ ಸುತ್ತಾಡಿದ್ರು ಯಾವುದೆ ಪ್ರಯೋಜನ ಆಗಲಿಲ್ಲ. ನಂತರ ನಾವು ಮೆಡಿಕವರ್ ಆಸ್ಪತ್ರೆಗೆ ಬಂದಾಗ ವೈದ್ಯರು ನಮ್ಮನ್ನ ತುಂಬಾ ಚನ್ನಾಗಿ ರೋಗದ ಬಗ್ಗೆ ವಿವರಿಸಿ ಧೈರ್ಯತುಂಬಿ ಆಪರೇಷನ್ ಮಾಡಿ ಕೇವಲ ಮೂರುದಿನದಲ್ಲಿ ಮನೆಗೆ ಕಳುಹಿಸಿದರು. ಸದ್ಯ ನಾನು ಮೊದಲಿನಂತೆ ದೈನಂದಿನ ಜೀವನ ಸಾಗಿಸುತ್ತಿರುವೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಡಾ ರೂಪೇಶ್ ಕಲ್ಯಾಣ್ ಮಾತನಾಡಿ,

ಅಪೆಂಡಿಕ್ಸ್‌ನ ಟ್ಯೂಮರ್‌ಗಳು ಕೆಲವೊಮ್ಮೆ ಹೊಟ್ಟೆ ನೋವು ಮತ್ತು ಕರುಳಿನ ಚಟುವಟಿಕೆಗೆ ಸಂಬಂಧಿಸಿದಂತಹ ಸಾಮಾನ್ಯ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳಬಹುದು. ನಿರಂತರವಾಗಿ ಅಥವಾ ಕಾರಣ ತಿಳಿಯದೆ ಹೊಟ್ಟೆ ನೋವು ಹಾಗೂ ಇತರ ಜೀರ್ಣಕ್ರಿಯೆಯ ಸಮಸ್ಯೆಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸದೆ ಸೂಕ್ತ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಈ ಪ್ರಕರಣದಲ್ಲಿ ಸಮಯೋಚಿತ ಪರೀಕ್ಷೆಗಳ ಮೂಲಕ ಅಪೆಂಡಿಕ್ಸ್‌ನ ಟ್ಯೂಮರ್ ಅನ್ನು ಪತ್ತೆಹಚ್ಚಲು ಸಾಧ್ಯವಾಗಿದ್ದು, ಅಗತ್ಯ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.

Leave a Reply

Your email address will not be published. Required fields are marked *