Friday, 30 October 2026
ತಾಜಾ ಸುದ್ದಿ
ಪಾರ್ಶ್ವವಾಯು ತಡೆಗಟ್ಟಲು ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಅಗತ್ಯಮೊಬೈಲ್ ಗೇಮ್‌ನಲ್ಲಿ ಕನ್ನಡಿಗನ ವಿಶ್ವಮಟ್ಟದ ಸಾಧನೆ: ಕ್ಯಾಂಡಿ ಕ್ರಷ್‌ನಲ್ಲಿ ಸೂರ್ಯ ರಾಜ್ ಹೊಸ ದಾಖಲೆ!ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜನ್ಮ ಜಯಂತಿ, ವಿಜಯೋತ್ಸವ ಸಂಭ್ರಮವಿಶ್ವ ಥ್ರಾಂಬೋಸಿಸ್ ದಿನ 2026: ಗರ್ಭಧಾರಣೆ, ಹೆರಿಗೆ ಬಳಿಕ ಮತ್ತು ಹಾರ್ಮೋನ್ ಚಿಕಿತ್ಸೆಯಿಂದ ಹೆಚ್ಚುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ: 33 ದಿನಗಳ ಬಳಿಕ ಮನೆಗೆ ಮರಳಿದ ಮಗುಜ್ವರದೊಂದಿಗೆ ಕುತ್ತಿಗೆ ಬಿಗಿತವೇ? ತಡಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ: ಮೆನಿಂಜೈಟಿಸ್‌ ಬಗ್ಗೆ ವೈದ್ಯರ ಎಚ್ಚರಿಕೆಹೃದಯದ ಆರೋಗ್ಯಕ್ಕೆ ಆದ್ಯತೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ಸಮಗ್ರ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದ ಮೆಡಿಕವರ್‌ನ ‘ಲವ್ ಯುವರ್ ಹಾರ್ಟ್ 2.0’ಪಾರ್ಶ್ವವಾಯು ತಡೆಗಟ್ಟಲು ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಅಗತ್ಯಮೊಬೈಲ್ ಗೇಮ್‌ನಲ್ಲಿ ಕನ್ನಡಿಗನ ವಿಶ್ವಮಟ್ಟದ ಸಾಧನೆ: ಕ್ಯಾಂಡಿ ಕ್ರಷ್‌ನಲ್ಲಿ ಸೂರ್ಯ ರಾಜ್ ಹೊಸ ದಾಖಲೆ!ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜನ್ಮ ಜಯಂತಿ, ವಿಜಯೋತ್ಸವ ಸಂಭ್ರಮವಿಶ್ವ ಥ್ರಾಂಬೋಸಿಸ್ ದಿನ 2026: ಗರ್ಭಧಾರಣೆ, ಹೆರಿಗೆ ಬಳಿಕ ಮತ್ತು ಹಾರ್ಮೋನ್ ಚಿಕಿತ್ಸೆಯಿಂದ ಹೆಚ್ಚುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ: 33 ದಿನಗಳ ಬಳಿಕ ಮನೆಗೆ ಮರಳಿದ ಮಗುಜ್ವರದೊಂದಿಗೆ ಕುತ್ತಿಗೆ ಬಿಗಿತವೇ? ತಡಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ: ಮೆನಿಂಜೈಟಿಸ್‌ ಬಗ್ಗೆ ವೈದ್ಯರ ಎಚ್ಚರಿಕೆಹೃದಯದ ಆರೋಗ್ಯಕ್ಕೆ ಆದ್ಯತೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ಸಮಗ್ರ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದ ಮೆಡಿಕವರ್‌ನ ‘ಲವ್ ಯುವರ್ ಹಾರ್ಟ್ 2.0’
ಆರೋಗ್ಯ

ಮೆಡಿಕವರ್ ಆಸ್ಪತ್ರೆಯಲ್ಲಿ ಅಪರೂಪದ ಕ್ರೇನಿಯೋಟಮಿ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು: ಹೂಡಿಯಲ್ಲಿರುವ ಮೆಡಿಕವರ್ ಆಸ್ಪತ್ರೆಯಲ್ಲಿ ಮೆದುಳಿನ ರಕ್ತನಾಳದ ಅನ್ಯೂರಿಸಮ್ ಹಾಗೂ ಅಪಧಮನಿ-ಶಿರಾ ಅಸಹಜತೆಯ (AVM) ಚಿಕಿತ್ಸೆಯ ಬಳಿಕ ತಲೆಬುರುಡೆಯ ಮೂಳೆಯಲ್ಲಿದ್ದ ದೋಷವನ್ನು ಸರಿಪಡಿಸಲು 38 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ರೈಟ್ ಫ್ರಂಟೋ-ಟೆಂಪೋರೋ-ಪ್ಯಾರಿಯೇಟಲ್ (FTP) ಕ್ರೇನಿಯೋಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಹಾಸನ ಜಿಲ್ಲೆಯ 38 ವರ್ಷದ ಪುರುಷ ರೋಗಿಗೆ ಈ ಹಿಂದೆ ಮೆದುಳಿನ ಬಲ
ಫ್ರಾಂಟಲ್ ( ಕೈ ಕಾಲು ಹಿಡಿತದ ಜಾಗ) MCA (Middle Cerebral Artery)ಭೈಫರ್ಕೇಷನ್ ಅನ್ಯೂರಿಸಮ್ ಜೊತೆಗೆ ಬಲ ಪ್ಯಾರಿಯೇಟಲ್ ಭಾಗದಲ್ಲಿ Spetzler-Martin Grade 2 AVM ಪತ್ತೆಯಾಗಿತ್ತು. ಇದರ ಹಿನ್ನೆಲೆಯಲ್ಲಿ ಬಲ FTP ಕ್ರೇನಿಯೋಟಮಿ ಮೂಲಕ MCA ಬಿಫರ್ಕೇಶನ್ ಅನ್ಯೂರಿಸಮ್‌ಗೆ ಕ್ಲಿಪ್ಪಿಂಗ್ ನಡೆಸಲಾಗಿದ್ದು, ಬಲ ಪ್ಯಾರಿಯೇಟಲ್ AVM ಅನ್ನು ಸಂಪೂರ್ಣವಾಗಿ ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗಿದೆ.

ಈ ಶಸ್ತ್ರಚಿಕಿತ್ಸೆಯನ್ನು ಡಾ. ಆನಂದ್ ವಿ.ಕೆ., ಸೀನಿಯರ್ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಮತ್ತು ಸ್ಪೈನ್ ಸರ್ಜನ್ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಡಾ. ಯಶವಂತ್ ಸಂದೀಪ್, ಕನ್ಸಲ್ಟೆಂಟ್ ನ್ಯೂರೋಸರ್ಜನ್ ಅವರು ಚಿಕಿತ್ಸಾ ತಂಡದಲ್ಲಿದ್ದರು.

ಈ ಬಗ್ಗೆ ಮಾತನಾಡಿದ ಡಾ ಆನಂದ್ ಈ ರೋಗವು ಅನುವಂಶಿಯವಾಗಿ ಬರುವ ಸಾದ್ಯತೆ ಹೆಚ್ಚಾಗಿದ್ದು, ಒಂದು ಲಕ್ಷ ಜನರಲ್ಲಿ ಮೂರ್ನಾಲ್ಕು ಜನರಲ್ಲಿ ಮಾತ್ರ ಕಾಣಸಿಗುತ್ತದೆ. ಸಾಮಾನ್ಯವಾಗಿ ಇದರ ಮೂಲ ಲಕ್ಷಣ ತಲೆನೋವು, ಶ್ರವಣಶಕ್ತಿ ಕುಂದುವುದು, ದೃಷ್ಟಿಯಲ್ಲಿ ಬದಲಾವಣೆ, ಫಿಟ್ಸ್, ಬಲಹೀನತೆ ಸೇರಿದಂತೆ ಹಲವು ರೀತಿಯಲ್ಲಿ ಕಾಣಬಹುದಾಗಿದೆ. ಈ ರೋಗಿಗೆ ಶಸ್ತ್ರ ಚಿಕಿತ್ಸೆ ಮಾಡಲು ಬರೋಬ್ಬರಿ ಆರುಗಂಟೆ ತೆಗೆದುಕೊಂಡಿದ್ದು ಸದ್ಯ ರೋಗಿಯು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿದ್ದಾರೆ.

ಇನ್ನು ರೋಗಿ ಸಂತೋಷ್ ಮಾತನಾಡಿ ನನಗೆ ಆರಂಭಿಕವಾಗಿ ತಲೆನೋವು ಕಾಣಿಸಿಕೊಂಡು ನಂತರ ತುಂಬಾ ತೊಂದರೆಗೆ ಒಳಗಾಗಿದ್ದೆ. ಹಲವು ಆಸ್ಪತ್ರಗೆ ಸುತ್ತಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ನಂತರ ಮೆಡಿಕವರ್ ಆಸ್ಪತ್ರೆಗೆ ಬಂದಾಗ ಡಾ ಆನಂದ್ ಮತ್ತು ಡಾ ಯಶವಂತ್ ನಮಗೆ ಮೂಲ ರೋಗದ ಬಗ್ಗೆ ವಿವರಿಸಿ ನಂತರ ಶಸ್ತ್ರ ಚಿಕಿತ್ಸೆ ಮಾಡಿದ್ರು. ಶಸ್ತ್ರ ಚಿಕಿತ್ಸೆ ಮಾಡಿದ ಕೇವಲ ಆರು ದಿನದಲ್ಲೆ ಮನೆಗೆ ಹೋಗಿದ್ದು ತುಂಬಾ ಸಂತಸ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.

ಈ ಪ್ರಕರಣವು ಸಂಕೀರ್ಣ ಮೆದುಳಿನ ಶಸ್ತ್ರಚಿಕಿತ್ಸೆಯ ಬಳಿಕ ತಲೆಬುರುಡೆಯ ರಚನೆಯನ್ನು ಪುನರ್‌ನಿರ್ಮಿಸುವಲ್ಲಿ ಕ್ರೇನಿಯೋಟಮಿ ಮಹತ್ವವನ್ನು ಮತ್ತೊಮ್ಮೆ ತೋರಿಸುತ್ತದೆ. ಒಟ್ಟಾರೆ ಈ ಪ್ರಕರಣದ ಮೂಲಕ ಮೆಡಿಕವರ್ ಆಸ್ಪತ್ರೆಯ ವೈದ್ರರು ರೋಗಿಗೆ ಮರುಜೀವ ನೀಡೋದರ ಜೊತೆಗೆ ಸಮಾಜದಲ್ಲಿ ಭರವಸೆ ಮೂಡಿಸೋ ಕೆಲಸ ಮಾಡಿದೆ.

Leave a Reply

Your email address will not be published. Required fields are marked *