Friday, 30 October 2026
ತಾಜಾ ಸುದ್ದಿ
ಪಾರ್ಶ್ವವಾಯು ತಡೆಗಟ್ಟಲು ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಅಗತ್ಯಮೊಬೈಲ್ ಗೇಮ್‌ನಲ್ಲಿ ಕನ್ನಡಿಗನ ವಿಶ್ವಮಟ್ಟದ ಸಾಧನೆ: ಕ್ಯಾಂಡಿ ಕ್ರಷ್‌ನಲ್ಲಿ ಸೂರ್ಯ ರಾಜ್ ಹೊಸ ದಾಖಲೆ!ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜನ್ಮ ಜಯಂತಿ, ವಿಜಯೋತ್ಸವ ಸಂಭ್ರಮವಿಶ್ವ ಥ್ರಾಂಬೋಸಿಸ್ ದಿನ 2026: ಗರ್ಭಧಾರಣೆ, ಹೆರಿಗೆ ಬಳಿಕ ಮತ್ತು ಹಾರ್ಮೋನ್ ಚಿಕಿತ್ಸೆಯಿಂದ ಹೆಚ್ಚುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ: 33 ದಿನಗಳ ಬಳಿಕ ಮನೆಗೆ ಮರಳಿದ ಮಗುಜ್ವರದೊಂದಿಗೆ ಕುತ್ತಿಗೆ ಬಿಗಿತವೇ? ತಡಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ: ಮೆನಿಂಜೈಟಿಸ್‌ ಬಗ್ಗೆ ವೈದ್ಯರ ಎಚ್ಚರಿಕೆಹೃದಯದ ಆರೋಗ್ಯಕ್ಕೆ ಆದ್ಯತೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ಸಮಗ್ರ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದ ಮೆಡಿಕವರ್‌ನ ‘ಲವ್ ಯುವರ್ ಹಾರ್ಟ್ 2.0’ಪಾರ್ಶ್ವವಾಯು ತಡೆಗಟ್ಟಲು ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಅಗತ್ಯಮೊಬೈಲ್ ಗೇಮ್‌ನಲ್ಲಿ ಕನ್ನಡಿಗನ ವಿಶ್ವಮಟ್ಟದ ಸಾಧನೆ: ಕ್ಯಾಂಡಿ ಕ್ರಷ್‌ನಲ್ಲಿ ಸೂರ್ಯ ರಾಜ್ ಹೊಸ ದಾಖಲೆ!ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜನ್ಮ ಜಯಂತಿ, ವಿಜಯೋತ್ಸವ ಸಂಭ್ರಮವಿಶ್ವ ಥ್ರಾಂಬೋಸಿಸ್ ದಿನ 2026: ಗರ್ಭಧಾರಣೆ, ಹೆರಿಗೆ ಬಳಿಕ ಮತ್ತು ಹಾರ್ಮೋನ್ ಚಿಕಿತ್ಸೆಯಿಂದ ಹೆಚ್ಚುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ: 33 ದಿನಗಳ ಬಳಿಕ ಮನೆಗೆ ಮರಳಿದ ಮಗುಜ್ವರದೊಂದಿಗೆ ಕುತ್ತಿಗೆ ಬಿಗಿತವೇ? ತಡಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ: ಮೆನಿಂಜೈಟಿಸ್‌ ಬಗ್ಗೆ ವೈದ್ಯರ ಎಚ್ಚರಿಕೆಹೃದಯದ ಆರೋಗ್ಯಕ್ಕೆ ಆದ್ಯತೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ಸಮಗ್ರ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದ ಮೆಡಿಕವರ್‌ನ ‘ಲವ್ ಯುವರ್ ಹಾರ್ಟ್ 2.0’
ಆರೋಗ್ಯ

ಆಲ್ಫಾ ಗಾರ್ಡನ್ಸ್ ನಿವಾಸಿಗಳಿಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸಿದ ಮೆಡಿಕವರ್ ಆಸ್ಪತ್ರೆ

ಬೆಂಗಳೂರು, ಸೆಪ್ಟೆಂಬರ್ 26, 2026: ಮಹದೇವಪುರದ ಆಲ್ಫಾ ಗಾರ್ಡನ್ ಲೇಔಟ್ ನಿವಾಸಿಗಳ ಆರೋಗ್ಯ ಮತ್ತು ತುರ್ತು ವೈದ್ಯಕೀಯ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಮೆಡಿಕವರ್ ಆಸ್ಪತ್ರೆಗಳು, ಆಲ್ಫಾ ಗಾರ್ಡನ್ಸ್ ಓನರ್ಸ್ ಅಸೋಸಿಯೇಷನ್ (AGOA) ಹಾಗೂ ಬಿಜೆಪಿ ಆರ್‌ಡಬ್ಲ್ಯುಎ, ಗ್ರಾಮಾಂತರ ಮಹಾದೇವಪುರ ಇವರ ಸಹಯೋಗದಲ್ಲಿ ಮಹತ್ವದ ಆರೋಗ್ಯ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಎಂಒಯು (MoU) ಸಹಿ ಸಮಾರಂಭ ಹಾಗೂ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮವು ಆಲ್ಫಾ ಗಾರ್ಡನ್ ಲೇಔಟ್‌ನ AGOA ಪಾರ್ಕ್‌ನಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಹದೇವಪುರ ಕ್ಷೇತ್ರದ ಶಾಸಕಿ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ, ಮೆಡಿಕವರ್ ಆಸ್ಪತ್ರೆಗಳ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಸಿದ್ದಾರೆಡ್ಡಿ, ಆಲ್ಫಾ ಗಾರ್ಡನ್ಸ್ ಓನರ್ಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು, ಬಿಜೆಪಿ ಆರ್‌ಡಬ್ಲ್ಯುಎ ಪ್ರತಿನಿಧಿಗಳು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

ಈ ಸಹಯೋಗದ ಮೂಲಕ ಆಲ್ಫಾ ಗಾರ್ಡನ್ ನಿವಾಸಿಗಳಿಗೆ ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಪ್ರಮುಖವಾಗಿ:

  • ಉಚಿತ ಆಂಬ್ಯುಲೆನ್ಸ್ ಸೇವೆ
  • ನಿವಾಸಿಗಳಿಗೆ ಉಚಿತ ಫ್ಯಾಮಿಲಿ ಹೆಲ್ತ್ ಕಾರ್ಡ್
  • ಅಪಾರ್ಟ್‌ಮೆಂಟ್‌ಗಳಲ್ಲಿ ನಿಯಮಿತವಾಗಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರಗಳು
  • ಮೆಡಿಕವರ್ ಆಸ್ಪತ್ರೆಗಳಲ್ಲಿ ಆದ್ಯತೆಯ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆ
  • ವೈದ್ಯಕೀಯ ಸೇವೆಗಳ ಮೇಲೆ ವಿಶೇಷ ರಿಯಾಯಿತಿಗಳು
  • ವಿಮಾ ಕಂಪನಿಗಳ ಕೋ-ಪೇ ಮೊತ್ತದಲ್ಲಿ ವಿಶೇಷ ರಿಯಾಯಿತಿಗಳು

ಶ್ರೀ ಸಿದ್ದಾರೆಡ್ಡಿ, ಪ್ರಾದೇಶಿಕ ನಿರ್ದೇಶಕರು, ಮೆಡಿಕವರ್ ಆಸ್ಪತ್ರೆ ಇವರು ಮಾತನಾಡಿ, ಸಮುದಾಯದ ಆರೋಗ್ಯ ಮತ್ತು ಸುರಕ್ಷತೆಗಾಗಿ ಆಸ್ಪತ್ರೆ ಮತ್ತು ಸ್ಥಳೀಯ ನಿವಾಸಿಗಳ ಸಂಘಟನೆಗಳು ಒಟ್ಟಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಮಹತ್ವದ್ದಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ದೊರೆಯುವುದು ಬಹಳ ಮುಖ್ಯ. ಆಲ್ಫಾ ಗಾರ್ಡನ್ ನಿವಾಸಿಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ಸೇರಿದಂತೆ ಆರೋಗ್ಯ ತಪಾಸಣೆ ಹಾಗೂ ಇತರ ವೈದ್ಯಕೀಯ ಸೇವೆಗಳನ್ನು ತಲುಪಿಸುವ ಈ ಸಹಯೋಗವು ಸಮುದಾಯದ ಆರೋಗ್ಯದತ್ತ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.

ಇನ್ನು ಮಹದೇವಪುರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ನಮ್ಮ ಕ್ಷೇತ್ರದ ನಿವಾಸಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ಮತ್ತು ಸಮಯಕ್ಕೆ ಸರಿಯಾಗಿ ಲಭ್ಯವಾಗಬೇಕು ಎಂಬುದು ನಮ್ಮ ಪ್ರಮುಖ ಆದ್ಯತೆ. ಆಲ್ಫಾ ಗಾರ್ಡನ್ ನಿವಾಸಿಗಳಿಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆ ಹಾಗೂ ನಿಯಮಿತ ಆರೋಗ್ಯ ಶಿಬಿರಗಳಂತಹ ಉಪಕ್ರಮಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಆರೋಗ್ಯದ ಮುನ್ನೆಚ್ಚರಿಕೆಯಲ್ಲಿ ಜನರಿಗೆ ಸಹಾಯವಾಗಲಿವೆ. ಇಂತಹ ಸಾರ್ವಜನಿಕ-ಖಾಸಗಿ ಸಹಯೋಗದ ಮೂಲಕ ಸಮುದಾಯದ ಆರೋಗ್ಯ ಮತ್ತು ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗುತ್ತದೆ ಎಂದರು.

ಈ ಕಾರ್ಯಕ್ರಮವು “ಆರೋಗ್ಯಕರ ಸಮುದಾಯ – ಬಲಿಷ್ಠ ಸಮುದಾಯ” ಎಂಬ ಆಶಯದೊಂದಿಗೆ ಆಸ್ಪತ್ರೆ, ನಿವಾಸಿಗಳ ಸಂಘಟನೆಗಳು ಮತ್ತು ಸ್ಥಳೀಯ ಸಮುದಾಯದ ನಡುವೆ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಹಕಾರಕ್ಕೆ ದಾರಿ ಮಾಡಿಕೊಡುವ ಉದ್ದೇಶ ಹೊಂದಿದೆ.

ಆಲ್ಫಾ ಗಾರ್ಡನ್ಸ್ ಓನರ್ಸ್ ಅಸೋಸಿಯೇಷನ್ (AGOA) ಹಾಗೂ ಮೆಡಿಕವರ್ ಆಸ್ಪತ್ರೆಗಳು ಮುಂದಿನ ದಿನಗಳಲ್ಲಿಯೂ ನಿವಾಸಿಗಳ ಅಗತ್ಯಕ್ಕೆ ಅನುಗುಣವಾಗಿ ಆರೋಗ್ಯ ಜಾಗೃತಿ, ವೈದ್ಯಕೀಯ ತಪಾಸಣೆ ಮತ್ತು ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಸಹಕರಿಸಲಿವೆ.

Leave a Reply

Your email address will not be published. Required fields are marked *