Friday, 30 October 2026
ತಾಜಾ ಸುದ್ದಿ
ಪಾರ್ಶ್ವವಾಯು ತಡೆಗಟ್ಟಲು ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಅಗತ್ಯಮೊಬೈಲ್ ಗೇಮ್‌ನಲ್ಲಿ ಕನ್ನಡಿಗನ ವಿಶ್ವಮಟ್ಟದ ಸಾಧನೆ: ಕ್ಯಾಂಡಿ ಕ್ರಷ್‌ನಲ್ಲಿ ಸೂರ್ಯ ರಾಜ್ ಹೊಸ ದಾಖಲೆ!ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜನ್ಮ ಜಯಂತಿ, ವಿಜಯೋತ್ಸವ ಸಂಭ್ರಮವಿಶ್ವ ಥ್ರಾಂಬೋಸಿಸ್ ದಿನ 2026: ಗರ್ಭಧಾರಣೆ, ಹೆರಿಗೆ ಬಳಿಕ ಮತ್ತು ಹಾರ್ಮೋನ್ ಚಿಕಿತ್ಸೆಯಿಂದ ಹೆಚ್ಚುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ: 33 ದಿನಗಳ ಬಳಿಕ ಮನೆಗೆ ಮರಳಿದ ಮಗುಜ್ವರದೊಂದಿಗೆ ಕುತ್ತಿಗೆ ಬಿಗಿತವೇ? ತಡಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ: ಮೆನಿಂಜೈಟಿಸ್‌ ಬಗ್ಗೆ ವೈದ್ಯರ ಎಚ್ಚರಿಕೆಹೃದಯದ ಆರೋಗ್ಯಕ್ಕೆ ಆದ್ಯತೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ಸಮಗ್ರ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದ ಮೆಡಿಕವರ್‌ನ ‘ಲವ್ ಯುವರ್ ಹಾರ್ಟ್ 2.0’ಪಾರ್ಶ್ವವಾಯು ತಡೆಗಟ್ಟಲು ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಅಗತ್ಯಮೊಬೈಲ್ ಗೇಮ್‌ನಲ್ಲಿ ಕನ್ನಡಿಗನ ವಿಶ್ವಮಟ್ಟದ ಸಾಧನೆ: ಕ್ಯಾಂಡಿ ಕ್ರಷ್‌ನಲ್ಲಿ ಸೂರ್ಯ ರಾಜ್ ಹೊಸ ದಾಖಲೆ!ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜನ್ಮ ಜಯಂತಿ, ವಿಜಯೋತ್ಸವ ಸಂಭ್ರಮವಿಶ್ವ ಥ್ರಾಂಬೋಸಿಸ್ ದಿನ 2026: ಗರ್ಭಧಾರಣೆ, ಹೆರಿಗೆ ಬಳಿಕ ಮತ್ತು ಹಾರ್ಮೋನ್ ಚಿಕಿತ್ಸೆಯಿಂದ ಹೆಚ್ಚುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ: 33 ದಿನಗಳ ಬಳಿಕ ಮನೆಗೆ ಮರಳಿದ ಮಗುಜ್ವರದೊಂದಿಗೆ ಕುತ್ತಿಗೆ ಬಿಗಿತವೇ? ತಡಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ: ಮೆನಿಂಜೈಟಿಸ್‌ ಬಗ್ಗೆ ವೈದ್ಯರ ಎಚ್ಚರಿಕೆಹೃದಯದ ಆರೋಗ್ಯಕ್ಕೆ ಆದ್ಯತೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ಸಮಗ್ರ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದ ಮೆಡಿಕವರ್‌ನ ‘ಲವ್ ಯುವರ್ ಹಾರ್ಟ್ 2.0’
ಆರೋಗ್ಯ

ಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ: 33 ದಿನಗಳ ಬಳಿಕ ಮನೆಗೆ ಮರಳಿದ ಮಗು

ಬೆಂಗಳೂರು:
ಆಂಧ್ರಪ್ರದೇಶದ ಮದನಪಲ್ಲಿಯ ನವಜಾತ ಶಿಶುವೊಂದಕ್ಕೆ ಸಂಭವಿಸಿದ್ದ ಗಂಭೀರ ಆರೋಗ್ಯ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರು, ಕೇವಲ 85 ನಿಮಿಷಗಳಲ್ಲಿ ವಿಶೇಷ ಅಂಬ್ಯೂಲೆನ್ಸ್ ಮೂಲಕ ಮಗುವನ್ನು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಗೆ ರವಾನಿಸಿ, ಬರೋಬ್ಬರಿ 33 ದಿನಗಳ ಸುದೀರ್ಘ ಚಿಕಿತ್ಸೆಯ ನಂತರ ಮಗುವನ್ನು ಸಂಪೂರ್ಣವಾಗಿ ಗುಣಮುಖಗೊಳಿಸಿ ಮನೆಗೆ ಕಳುಹಿಸಿದ್ದಾರೆ. ಈ ಕುರಿತು ಇಂದು ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವೈದ್ಯರು ಹಾಗೂ ಆಡಳಿತ ಮಂಡಳಿ ವಿವರ ಹಂಚಿಕೊಂಡರು. 

ಏನಿದು ಪ್ರಕರಣ?
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಬಾಲೆ ರಜನಿ ಅವರ ನವಜಾತ ಹೆಣ್ಣು ಮಗು ಹುಟ್ಟಿದ ತಕ್ಷಣವೇ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಮಗುವಿನ ಶ್ವಾಸಕೋಶದಲ್ಲಿ ಮಲದ ಅಂಶ ಪ್ರವೇಶಿಸಿ (ಮೆಕೋನಿಯಂ ಆಸ್ಪಿರೇಷನ್ ಸಿಂಡ್ರೋಮ್) ಹಾಗೂ ಶ್ವಾಸಕೋಶ ಗಾಳಿ ಸೋರಿಕೆಯಿಂದ ಬ್ಲಾಕ್ ಆಗಿದ್ದರಿಂದ (ನಿಮೊಥೊರಾಕ್ಸ್) ಮಗುವಿನ ಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು. ಕೂಡಲೇ ಮಗುವನ್ನು ಅತ್ಯಾಧುನಿಕ ಲೈಫ್ ಸಪೋರ್ಟ್ ಸೌಲಭ್ಯವಿದ್ದ ‘ವಿಶೇಷ ಅಂಬ್ಯೂಲೆನ್ಸ್’ ನಲ್ಲಿ ಮದನಪಲ್ಲಿಯಿಂದ ಕೇವಲ 85 ನಿಮಿಷಗಳಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. 

ವೈದ್ಯರ ಹೇಳಿಕೆ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವೈದ್ಯರಾದ ಡಾ. ಶಿವಶಂಕರ್ ದಿಗ್ಗಿಕ್ಕರ್ ಹಾಗೂ ಡಾ. ಲತೀಶ್, “ಮಗು ಆಸ್ಪತ್ರೆಗೆ ಬಂದಾಗ ಉಸಿರಾಟದ ವ್ಯವಸ್ಥೆ ಹಾಗೂ ರಕ್ತದೊತ್ತಡ ಸಂಪೂರ್ಣ ಕ್ಷೀಣಿಸಿತ್ತು. ತಕ್ಷಣವೇ ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (NICU) ದಾಖಲಿಸಿ, ಕೃತಕ ಉಸಿರಾಟದ ಯಂತ್ರ (HFOV High-Frequency Oscillatory Ventilation), ಇನ್‌ಹೇಲ್ಡ್ ನೈಟ್ರಿಕ್ ಆಕ್ಸೈಡ್ (iNO) ಮತ್ತು ದ್ರವ ಚಿಕಿತ್ಸೆ ನೀಡಲಾಯಿತು. ಮಗುವಿಗೆ ಉಸಿರಾಟದ ಸಮಸ್ಯೆಯ ಜೊತೆಗೆ ಉಂಟಾಗಿದ್ದ ಶ್ವಾಸಕೋಶದ ಸಂಕೋಚನ (Laryngomalacia) ಮತ್ತಿತರ ಸವಾಲುಗಳನ್ನು 33 ದಿನಗಳ ಚಿಕಿತ್ಸೆಯ ಮೂಲಕ ನಿವಾರಿಸಲಾಗಿದೆ. ಪ್ರಸ್ತುತ ಮಗು ಸಂಪೂರ್ಣ ಚೇತರಿಸಿಕೊಂಡಿದ್ದು, ಆರೋಗ್ಯವಾಗಿದ್ದಾಳೆ,” ಎಂದು ವಿವರಣೆ ನೀಡಿದರು. 

ಮೆಡಿಕವರ್ ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕರಾದ (Regional Director) ಸಿದ್ದಾರೆಡ್ಡಿ ಮಾತನಾಡಿ, “ಅತ್ಯಂತ ಸಂಕೀರ್ಣ ಹಾಗೂ ಚಾಲೆಂಜಿಂಗ್ ಆಗಿದ್ದ ಈ ಪ್ರಕರಣವನ್ನು ನಮ್ಮ ನಿಪುಣ ವೈದ್ಯರ ತಂಡ ಯಶಸ್ವಿಯಾಗಿ ನಿಭಾಯಿಸಿದೆ. ತುರ್ತು ಸಮಯದಲ್ಲಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ಮಗುವಿನ ಪ್ರಾಣ ಉಳಿಸಿದ್ದು ನಮಗೆ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮತ್ತಷ್ಟು ಸುಧಾರಿತ ‘ಪಿಡಿಯಾಟ್ರಿಕ್ ಕಾರ್ಡಿಯಾಲಜಿ’ (ಮಕ್ಕಳ ಹೃದಯರೋಗ) ವಿಭಾಗವನ್ನು ಶೀಘ್ರದಲ್ಲೇ ಆರಂಭಿಸಲಿದ್ದೇವೆ,” ಎಂದು ಪ್ರಕಟಿಸಿದರು.
ಪೋಷಕರ ಕಣ್ಣೀರು-ಸಂತಸ:
33 ದಿನಗಳ ಸತತ ಹೋರಾಟದ ಬಳಿಕ ತಮ್ಮ ಮಗು ಪುನರ್ಜನ್ಮ ಪಡೆದು ನಗೆಬೀರುತ್ತಿರುವುದನ್ನು ಕಂಡು ಮಗುವಿನ ತಂದೆ ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟು ಸಂತಸ ವ್ಯಕ್ತಪಡಿಸಿದರು. “ಸರಿಯಾದ ಸಮಯಕ್ಕೆ ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಿ, ತಾಯಿಯಂತೆ ಮಗುವನ್ನು ಆರೈಕೆ ಮಾಡಿದ ಮೆಡಿಕವರ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ನಾವು ಚಿರಋಣಿ” ಎಂದು ಧನ್ಯವಾದ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಸೆಂಟರ್ ಹೆಡ್ ಶ್ರೀವಲ್ಲಿ, ವೈದ್ಯರಾದ ಡಾ. ಶಿವಶಂಕರ್ ದಿಗ್ಗಿಕ್ಕರ್, ಡಾ. ಲತೀಶ್, ರೀಜನಲ್ ಡೈರೆಕ್ಟರ್ ಸಿದ್ದಾರೆಡ್ಡಿ ಹಾಗೂ ಮಗುವಿನ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *