Friday, 30 October 2026
ತಾಜಾ ಸುದ್ದಿ
ಪಾರ್ಶ್ವವಾಯು ತಡೆಗಟ್ಟಲು ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಅಗತ್ಯಮೊಬೈಲ್ ಗೇಮ್‌ನಲ್ಲಿ ಕನ್ನಡಿಗನ ವಿಶ್ವಮಟ್ಟದ ಸಾಧನೆ: ಕ್ಯಾಂಡಿ ಕ್ರಷ್‌ನಲ್ಲಿ ಸೂರ್ಯ ರಾಜ್ ಹೊಸ ದಾಖಲೆ!ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜನ್ಮ ಜಯಂತಿ, ವಿಜಯೋತ್ಸವ ಸಂಭ್ರಮವಿಶ್ವ ಥ್ರಾಂಬೋಸಿಸ್ ದಿನ 2026: ಗರ್ಭಧಾರಣೆ, ಹೆರಿಗೆ ಬಳಿಕ ಮತ್ತು ಹಾರ್ಮೋನ್ ಚಿಕಿತ್ಸೆಯಿಂದ ಹೆಚ್ಚುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ: 33 ದಿನಗಳ ಬಳಿಕ ಮನೆಗೆ ಮರಳಿದ ಮಗುಜ್ವರದೊಂದಿಗೆ ಕುತ್ತಿಗೆ ಬಿಗಿತವೇ? ತಡಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ: ಮೆನಿಂಜೈಟಿಸ್‌ ಬಗ್ಗೆ ವೈದ್ಯರ ಎಚ್ಚರಿಕೆಹೃದಯದ ಆರೋಗ್ಯಕ್ಕೆ ಆದ್ಯತೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ಸಮಗ್ರ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದ ಮೆಡಿಕವರ್‌ನ ‘ಲವ್ ಯುವರ್ ಹಾರ್ಟ್ 2.0’ಪಾರ್ಶ್ವವಾಯು ತಡೆಗಟ್ಟಲು ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಅಗತ್ಯಮೊಬೈಲ್ ಗೇಮ್‌ನಲ್ಲಿ ಕನ್ನಡಿಗನ ವಿಶ್ವಮಟ್ಟದ ಸಾಧನೆ: ಕ್ಯಾಂಡಿ ಕ್ರಷ್‌ನಲ್ಲಿ ಸೂರ್ಯ ರಾಜ್ ಹೊಸ ದಾಖಲೆ!ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜನ್ಮ ಜಯಂತಿ, ವಿಜಯೋತ್ಸವ ಸಂಭ್ರಮವಿಶ್ವ ಥ್ರಾಂಬೋಸಿಸ್ ದಿನ 2026: ಗರ್ಭಧಾರಣೆ, ಹೆರಿಗೆ ಬಳಿಕ ಮತ್ತು ಹಾರ್ಮೋನ್ ಚಿಕಿತ್ಸೆಯಿಂದ ಹೆಚ್ಚುವ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ: 33 ದಿನಗಳ ಬಳಿಕ ಮನೆಗೆ ಮರಳಿದ ಮಗುಜ್ವರದೊಂದಿಗೆ ಕುತ್ತಿಗೆ ಬಿಗಿತವೇ? ತಡಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ: ಮೆನಿಂಜೈಟಿಸ್‌ ಬಗ್ಗೆ ವೈದ್ಯರ ಎಚ್ಚರಿಕೆಹೃದಯದ ಆರೋಗ್ಯಕ್ಕೆ ಆದ್ಯತೆ: ಮೆಡಿಕವರ್ ಆಸ್ಪತ್ರೆಗಳಿಂದ ₹999ಕ್ಕೆ ಸಮಗ್ರ ಹಾರ್ಟ್ ಸ್ಕ್ರೀನಿಂಗ್ ಪ್ಯಾಕೇಜ್ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದ ಮೆಡಿಕವರ್‌ನ ‘ಲವ್ ಯುವರ್ ಹಾರ್ಟ್ 2.0’
ಆರೋಗ್ಯ

ಮಹದೇವಪುರ ಪೊಲೀಸ್ ಠಾಣೆಯಲ್ಲಿ ನೂತನ ಫ್ಲೆಕ್ಸ್ ಲೈಟ್ ಬೋರ್ಡ್ ಲೋಕಾರ್ಪಣೆ; ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ

ಬೆಂಗಳೂರು: ಮಹದೇವಪುರ ಪೊಲೀಸ್ ಠಾಣೆಯಲ್ಲಿ ನೂತನ ಫ್ಲೆಕ್ಸ್ ಲೈಟ್ ಸೈನ್‌ಬೋರ್ಡ್ ಅನ್ನು ಮೆಡಿಕವರ್ ಆಸ್ಪತ್ರೆಗಳು, ವೈಟ್‌ಫೀಲ್ಡ್ ಹಾಗೂ VSF ಸಹಯೋಗದಲ್ಲಿ ಸ್ಥಾಪಿಸಲಾಗಿದ್ದು, ಇದರ ಉದ್ಘಾಟನೆ ಮೆಡಿಕವರ್ ಆಸ್ಪತ್ರೆಗಳ ಪ್ರಾದೇಶಿಕ ನಿರ್ದೇಶಕ ಶ್ರೀ ಸಿದ್ದಾ ರೆಡ್ಡಿ, VSF ಸಂಸ್ಥಾಪಕ ಹಾಗೂ ಅಧ್ಯಕ್ಷ ಶ್ರೀ ರವಿ ರಾಜಹಂಸ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ವಸಂತ್ ಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಮೆಡಿಕವರ್ ಆಸ್ಪತ್ರೆಗಳು, ವೈಟ್‌ಫೀಲ್ಡ್ ವತಿಯಿಂದ ಪೊಲೀಸ್ ಸಿಬ್ಬಂದಿಗಾಗಿ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು. ಶಿಬಿರದಲ್ಲಿ ಕಣ್ಣಿನ ತಪಾಸಣೆ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ, ECG ಹಾಗೂ ವೈದ್ಯರ ಸಮಾಲೋಚನೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಅಗತ್ಯವಿರುವ ಪೊಲೀಸ್ ಸಿಬ್ಬಂದಿಗೆ ಉಚಿತ ದೃಷ್ಟಿ ಕನ್ನಡಕಗಳನ್ನು ಸಹ ನೀಡಲಾಗುತ್ತದೆ. ಸುಮಾರು 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಶಿಬಿರದ ಪ್ರಯೋಜನ ಪಡೆದಿದ್ದಾರೆ.

ಪೊಲೀಸ್ ಸಿಬ್ಬಂದಿಯ ಕರ್ತವ್ಯವು ಹೆಚ್ಚಿನ ಒತ್ತಡ, ಅನಿಯಮಿತ ಕೆಲಸದ ಸಮಯ ಹಾಗೂ ನಿರಂತರ ಸಾರ್ವಜನಿಕ ಸೇವೆಯನ್ನು ಒಳಗೊಂಡಿರುವುದರಿಂದ, ನಿಯಮಿತ ಆರೋಗ್ಯ ತಪಾಸಣೆ ಅತ್ಯಂತ ಮುಖ್ಯವಾಗಿದೆ. ಈ ರೀತಿಯ ಶಿಬಿರಗಳು ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಲು, ರಕ್ತದೊತ್ತಡ, ಮಧುಮೇಹ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸಹಕಾರಿಯಾಗಿದೆ.

ಮೆಡಿಕವರ್ ಆಸ್ಪತ್ರೆಯ ರಿಜನಲ್ ಡೈರೆಕ್ಟರ್ ಶ್ರೀ ಸಿದ್ದಾರೆಡ್ಡಿ ಮಾತನಾಡಿ
“ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಯೂ ಸಮಾಜದ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಅವರ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬಹುದು. ಪೊಲೀಸ್ ಸಿಬ್ಬಂದಿಗಾಗಿ ಈ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲು ಸಾಧ್ಯವಾಗಿರುವುದು ನಮಗೆ ಸಂತೋಷ ತಂದಿದೆ.”

ಇದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ವಸಂತ್ ಕುಮ್ರ್ ಮಾತನಾಡಿ
“ನಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮೆಡಿಕವರ್ ಆಸ್ಪತ್ರೆ ಆಯೋಜಿಸಿರುವ ಈ ಆರೋಗ್ಯ ತಪಾಸಣಾ ಶಿಬಿರವು ಅತ್ಯಂತ ಉಪಯುಕ್ತವಾಗಿದೆ. ಕರ್ತವ್ಯದ ಒತ್ತಡದ ನಡುವೆಯೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಇಂತಹ ಶಿಬಿರಗಳು ಪೊಲೀಸ್ ಸಿಬ್ಬಂದಿಗೆ ಉತ್ತಮ ಅವಕಾಶ ಕಲ್ಪಿಸುತ್ತವೆ. ಈ ಸಮಾಜಮುಖಿ ಕಾರ್ಯಕ್ಕಾಗಿ ಮೆಡಿಕವರ್ ಆಸ್ಪತ್ರೆಗಳು ಹಾಗೂ VSFಗೆ ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *